◆ KARNATAKA, BANGALORE    ↪

Advertisement
SHARE……LIKE……COMMENT……

ಕಲಬುರಗಿ:

ಶಾಸಕ ಉಮೇಶ್​ ಜಾಧವ್​ ರಾಜೀನಾಮೆಯಿಂದ ತೆರವಾಗಿದ್ದ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಡೇಟ್ ಫಿಕ್ಸ್ ಆಗಿದೆ. ಮೇ19 ರಂದು ಕುಂದಗೋಳ ಜತೆಜತೆಗೆ ಚಿಂಚೋಳಿ ಕ್ಷೇತ್ರಕ್ಕೂ ಮತದಾನ ನಡೆಯಲಿದೆ. ಏಪ್ರಿಲ್​ 22ರಿಂದ 29 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಮೇ 2 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಶಾಸಕ ಸಿ.ಎಸ್​ ಶಿವಳ್ಳಿ ನಿಧನ ಹಿನ್ನಲೆಯಲ್ಲಿ ತೆರವಾಗಿದ್ದ ಕುಂದಗೋಳ ಉಪಚುನಾವಣೆಯೂ ಮೇ.19ರಂದೇ ನಡೆಯಲಿದೆ. ಲೋಕಸಭಾ ಚುನಾವಣೆ ಫಲಿತಾಂಶದ ದಿನವೇ ಅಂದ್ರೆ ಮೇ 23ಕ್ಕೆ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರದ ರಿಸಲ್ಟ್​ ಹೊರಬೀಳಲಿದೆ……