◆ KARNATAKA, BANGALORE    ↪

Advertisement

ಡ್ರೈ ಮಟನ್‌ ಚಿಲ್ಲಿ ..!

SHARE……LIKE……COMMENT……
*ಮಟನ್‌ – 1/2 ಕೆ.ಜಿ
*ಕತ್ತರಿಸಿದ ಈರುಳ್ಳಿ 3
*ಹಸಿ ಮೆಣಸಿನ ಕಾಯಿ 12
*ಶುಂಠಿ – 2 ಇಂಚು ಗಾತ್ರದ್ದು
*ಬೆಳ್ಳುಳ್ಳಿ – 12 ಸೊಳೆಗಳು
*ಗರಂ ಮಸಾಲಾ – 1/2 ಟೀ ಚಮಚ
*ಜೀರಿಗೆ ಪುಡಿ – 1/2 ಟೀ ಚಮಚ
*ಕೊತ್ತಂಬರಿ ಪುಡಿ – 1/2 ಟೀ ಚಮಚ
*ಮಸಾಲೆ ಎಲೆ (ತೇಜ್‌ ಪತ್ತಾ) – 2
*ಕೆಂಪು ಮೆಣಸಿನ ಪುಡಿ – 1,1/2 ಟೀ ಚಮಚ
*ಕೊತ್ತಂಬರಿ ಸೊಪ್ಪು – 1 ಟೇಬಲ್‌ ಚಮಚ
*ಲಿಂಬೆ ಹಣ್ಣಿನ ರಸ – 2 ಟೀ ಚಮಚ
*ಬೆಣ್ಣೆ – 2 ಟೇಬಲ್‌ ಚಮಚ
*ರುಚಿಗೆ ಬೇಕಾಗಿರುವಷ್ಟು ಉಪ್ಪು

ಡ್ರೈ ಮಟನ್‌ ಚಿಲ್ಲಿ ತಯಾರಿಸುವ ಸುಲಭ ವಿಧಾನ:

*ಮಟನ್‌ ತುಂಡುಗಳನ್ನು ಬೇಕಾದ ಹದಕ್ಕೆ ಕತ್ತರಿಸಿ ಸ್ವಚ್ಛಗೊಳಿಸಿ ಹೆಚ್ಚಿನ ಪ್ರಮಾಣದ ನೀರನ್ನು ಹೊರಹಾಕಿ.
*ಮೆಣಸಿನ ಪುಡಿ, ಗರಂ ಮಸಾಲಾ ಪುಡಿಗಳನ್ನು ಬೆರೆಸಿಕೊಂಡು ಚೆನ್ನಾಗಿ ಮಿಶ್ರಣಮಾಡಿಕೊಳ್ಳಿ.
*ಒಂದು  ಪಾತ್ರೆಯಲ್ಲಿ ಬೆಣ್ಣೆಯನ್ನು ಬಿಸಿಮಾಡಿಕೊಂಡು ಅದಕ್ಕೆ ಮಸಾಲೆ ಎಲೆ, ಕತ್ತರಿಸಿದ ಈರುಳ್ಳಿ ಮತ್ತು ಮಟನ್‌ ತುಂಡುಗಳನ್ನು         ಹಾಕಿಕೊಂಡು ಚೆನ್ನಾಗಿ ಬೆರಸಿ ತಿಳಿ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
*ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಅರೆಯಿರಿ.
*ಇವುಗಳನ್ನು ಮಟನ್‌ ತುಂಡುಗಳಿಗೆ ಬೆರೆಸಿ ಮಟನ್‌ ಕಂದು ಬಣ್ಣಕ್ಕೆ ಬರುವತನಕ ಫ್ರೈ ಮಾಡಿ, ಇದಕ್ಕೆ ಡ್ರೈ  ಮಸಾಲೆ ಪುಡಿಗಳಾದ ಕೊತ್ತಂಬರಿ *ಪುಡಿ ಮತ್ತು ಜೀರಿಗೆ ಪುಡಿಗಳನ್ನು ಹಾಕಿ ಚೆನ್ನಾಗಿ ಕಲಾಯಿಸಿ ಮತ್ತು ಇದಾದ ನಂತರ ಕೊತ್ತಂಬರಿ ಸೊಪ್ಪು ಮತ್ತು ಲಿಂಬೆ ಹಣ್ಣಿನ ರಸದಿಂದ ಗಾರ್ನಿಶ್‌ ಮಾಡಿ ಸವಿಯಿರಿ……