◆ KARNATAKA, BANGALORE    ↪

Advertisement

ಶಾಲಾ ಮಕ್ಕಳ ಬಿಸಿಯೂಟದಲ್ಲಿ ಪ್ಲಾಸ್ಟಿಕ್​ ಅಕ್ಕಿ..!

SHARE……LIKE……COMMENT……

ಮೈಸೂರು: 

ತಿ.ನರಸೀಪುರ ತಾಲೂಕಿನ ಬನ್ನಹಳ್ಳಿಹುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಪ್ಲಾಸ್ಟಿಕ್​ ಅಕ್ಕಿ ಪತ್ತೆಯಾಗಿರುವ ಘಟನೆ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಗ್ರಾಮದ ಶಾಲೆಯ ಅಡುಗೆ ಸಹಾಯಕರು ಅಕ್ಕಿ ಸೋಸುವಾಗ ಪ್ಲಾಸ್ಟಿಕ್​ ಅಕ್ಕಿಕಾಳುಗಳೂ ಪತ್ತೆಯಾಗಿವೆ. ಪಾಲಕರು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ತನಿಖೆಗೆ ಒಳಪಡಿಸಬೇಕು ಹಾಗೂ ಉತ್ತಮ ಗುಣಮಟ್ಟದ ಆಹಾರ ಪೂರೈಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ……