◆ KARNATAKA, BANGALORE    ↪

Advertisement

5 ಎಕರೆ ಟೊಮ್ಯಾಟೋ ಬೆಳೆನಾಶ ಮಾಡಿದ ಕೋಲಾರ ರೈತ..!

TOMATO WASTE
SHARE……LIKE……COMMENT……

ಕೋಲಾರ:

ಕೊರೋನಾ ಲಾಕ್​ಡೌನ್​ನಿಂದ ಕೋಲಾರದ ಟಮ್ಯಾಟೋ ರೈತ ಕಂಗಾಲಾಗಿದ್ದಾನೆ. ಉತ್ತಮ ಬೆಲೆ ಸಿಗುತ್ತೆ ಅಂತ ಸಾಲ ಮಾಡಿ ಬೆಳೆದ ಟೊಮ್ಯಾಟೋಗೆ ಬೇಡಿಕೆ ಕಡಿಮೆಯಾಗಿದೆ. ಶ್ರೀನಿವಾಸಪುರ ತಾಲೂಕಿನ ಪೆಗೆಲಪಲ್ಲಿ ಗ್ರಾಮದ ರೈತ ಟೊಮ್ಯಾಟೋವನ್ನ ಹೊಲದಲ್ಲೇ ನಾಶ ಮಾಡಿದ್ದಾನೆ. ರೈತ ಮಂಜುನಾಥ್​ ಎಂಬುವವರು ಸುಮಾರು 7 ಲಕ್ಷ ರೂ ಖರ್ಚು ಮಾಡಿ 5 ಎಕರೆಯಲ್ಲಿ ಟೊಮ್ಯಾಟೋ ಬೆಳೆದಿದ್ರು. ಇದೀಗ ಸೂಕ್ತ ಮಾರುಕಟ್ಟೆ ಮತ್ತು ಸೂಕ್ತ ಬೆಲೆ ಇಲ್ಲದ ಕಾರಣ ಬೆಳೆದ ಬೆಳೆಯನ್ನೇ ನಾಶ ಮಾಡಿದ್ದಾರೆ…..