◆ KARNATAKA, BANGALORE    ↪

Advertisement

ಜನವರಿಯಲ್ಲಿ ಹೊಸ ಪಕ್ಷ ಆರಂಭ ರಜನಿಕಾಂತ್ ಘೋಷಣೆ..!

SHARE……LIKE……COMMENT……

ಚೆನ್ನೈ:

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಉಡುಗೊರೆ ಘೋಷಿಸಿದ್ದಾರೆ. ರಾಜಕೀಯ ಪ್ರವೇಶದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಬಹಳಷ್ಟು ವರ್ಷಗಳಿಂದ ರಾಜಕೀಯ ಪಕ್ಷದ ಬಗ್ಗೆ ಹೇಳಿಕೊಂಡು ಬರುತ್ತಿದ್ದ ಅವರು. ಕೊನೆಗೂ ಹೊಸ ಪಕ್ಷ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ. ಜನವರಿಯಲ್ಲಿ ರಾಜಕೀಯ ಪಕ್ಷ ಆರಂಭಿಸುವುದಾಗಿ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ಡಿಸೆಂಬರ್ 31ರಂದು ಪಕ್ಷ ಘೋಷಿಸಲಾಗುವುದು. ಪೂರ್ಣ ವಿವರ ಮುಂದೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ರಜಿನಿಕಾಂತ್ ಟ್ವೀಟ್ ನಿಂದಾಗಿ ತಮಿಳುನಾಡಿನಲ್ಲಿ ಅಭಿಮಾನಿಗಳು ಸಂಭ್ರಮ ಆಚರಿಸಿಕೊಳ್ಳುತ್ತಿದ್ದಾರೆ……